Skip to content

Psychosomatic Therapy – PsyT® Derived from Fundamentals of Dr Bhushan Jathar’s quick healing Techniques. ( Described as it is in Kannada Language)

Interview Organised At Gokarna

Research and Documenting Organisation - Maha Arogya Dhama, Gokarna.

Date - 20 February 2018

ಸಾಧು- ಸತ್ಪುರುಷರ, ಜ್ಞಾನ - ವಿಜ್ಞಾನಿಗಳ, ವೈದ್ಯ - ವಿಚಾರವಂತರ ಒಂದು ಉಜ್ವಲ ಪರಂಪರೆಯನ್ನು ಹೊಂದಿದ ಭಾಗ್ಯ ನಮ್ಮದು. ತಮ್ಮ ವಿಚಾರಧಾರೆಯ ಹಾಗು ಅನುಭವ ವಾಕ್ಯಗಳ ಮೂಲಕ ಮನು ಸಮುದಾಯಕ್ಕೆ ಘನಸಿರಿಯ ಉಡುಗೊರೆ ನೀಡುತ್ತ  , ಸೇವಾ ಪ್ರವರ್ರುತ್ತಿಯಿಂದ ಸಾಗುತ್ತಿರುವ ಒಂದು ಸಮಗ್ರ ದೀಪಿಕೆಯುಳ್ಳ ಒಬ್ಬ ಮಹಾನುಭಾವ Dr Bhushan Jathar ನಮ್ಮ ನಡುವೆ ಜನ್ಮಿಸಿರುವುದು ಒಂದು ಪುಣ್ಯದ ಮಾತು.

ಸಮಾಜವಾದ, ರಾಜಕೀಯ, ಅರ್ಥ ಶಾಸ್ತ್ರ, ಕೃಷಿ ವಿಜ್ಞಾನ, ವೈದ್ಯಕೀಯ ಶಾಸ್ತ್ರ, ಆತ್ಮ ಜಿಜ್ಞಾಸ, ವೇದ ವೇದಾಂತ, ತರ್ಕ ಶಾಸ್ತ್ರ, ಮನೋ ವಿಜ್ಞಾನ , ಸಂಗೀತ ಶಾಸ್ತ್ರ,ಸಾಹಿತ್ಯ ಹಾಗು ಇನ್ನು ಹಲವಾರು ಬಗೆಯ ಸಮಗ್ರ ಜ್ಞಾನ ದೇಗುಲದ ಹೊನಲಾಗಿ ಹರಿಸಿ ಭುವನ ಭಾಗ್ಯದ ಬೆಳಸನ್ನು ನೀಡುತ್ತಿರುವ ಒಂದು ಹಿರಿಯ ಚೇತನ Dr Bhushan Jathar ಅವರು .

Psycosomatic Therapy  - PsyT ಎಲ್ಲ ಪರಿಣಾಮಕಾರಿ ಚಿಕಿತ್ಸೆಗಳ ಒಂದು ಪರಿಪೂರ್ಣ ಮಿಶ್ರಣ. ಇದರಲ್ಲಿ  Dr Jathar ಅಂತಹ ಹಿರಿಯ ಅನುಭವಿ ಚೇತನದ ಧ್ಯಾನಾನುಭವದಿಂದ ಮೂಡಿದ ಹಲವಾರು ವೈದ್ಯಕೀಯ ತಂತ್ರಗಳು, ಮರ್ಮ ಚಿಕಿತ್ಸೆ , ದಶಾನಾಡಿ ವಿಧಾನ ,

ಫಿಸಿಯೋಥೆರಪಿ , ಯೋಗ ಥೆರಪಿ, ಉಪಯುಕ್ತ ಯೋಗಾಸನ ಹಾಗು ಪ್ರಾಣಾಯಾಮಗಳನ್ನು ಒಂದುಗೂಡಿಸಿ ರೂಪಿಸಲಾದ ಚಿಕಿತ್ಸೆ . Dr Jathar ಅವರ ವಿಧಾನಗಳು ಎಷ್ಟೋ ದಶಕಗಳಿಂದ ಜನ ಸಾಮಾನ್ಯರ ನೋವನ್ನು ಗುಣಪಡಿಸಿ ರೋಗಿಗಳ ಜೀವನವನ್ನು ಸಮೃದ್ಧಗೊಳಿಸುತ್ತಿವೆ.ಈಗಾಗಲೇ ಹಲವಾರು ದೇಶ ವಿದೇಶದಿಂದ ಬಂದ ರೋಗಿಗಳು ಈ ಚಿಕಿತ್ಸೆಯ ಉಪಯೋಗ ಪಡೆದುಕೊಂಡಿದ್ದಾರೆ.

ಈ ಚಿಕಿತ್ಸೆಯ ಅಂಗರಚನಾಶಾಸ್ತ್ರವನ್ನು ವಿವರಿಸಲು ಹಲವಾರು ವಿಷಯ ಜ್ಞಾನದ ಅವಶ್ಯಕತೆ ಇದೆ. ಇದಕೊಸ್ಕರ  ಆತ್ಮಾನುಭವ, ಅಂತಃಪ್ರಜ್ಞೆ, ಯೋಗ, ಆಯುರ್ವೇದ ಹಾಗು ಜನಜೀವನದ ಅನೇಕ ಮಜಲುಗಳ ಅಮೂಲಾಗ್ರವಾದ ಪರಿಚಯವಿಲ್ಲದೆ ಅದು ಅಸಾಧ್ಯ. ವ್ಯಾಪಕ ಅಧ್ಯಯನ, Dr Jathar ಅವರ ಕ್ರಮಬದ್ಧ ಬೋಧನೆ, ಮಾರ್ಗದರ್ಶನ ಹಾಗು ನಿರಂತರ ಸೋಂಶೋಧನೆಯ ಪರಿಶ್ರಮದಿಂದ Psycosomatic Therapy - PsT ಯ ಪ್ರಾಯೋಗಿಕ ಹಾಗು ಸೈದ್ಧಾಂತಿಕ ವಿವರವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಜನ ಸಮುದಾಯ  Dr Bhushanji ಅವರನ್ನು   " ಪ್ರಾಚೀನ ವೈದ್ಯಕೀಯ ಶಾಸ್ತ್ರದ ಪಿತಾಮಹ " " ಸ್ರಜನಾತ್ಮಕ ಜಗತ್ತಿನ ವ್ಯಾಸ  "               " ಸರ್ವಜ್ಞ" ಎಂದು ಕರೆಯುವುದರಲ್ಲಿ ತಪ್ಪೇನಿಲ್ಲ. ಅವರ ಅಂತ್ಯವಿಲ್ಲದ ಜ್ಞಾನ ವ್ಯಾಪ್ತಿ, ನ್ಯಾಯ ನಿಷ್ಟುರತೆ ಹಾಗು ವಚನಗಳಿಂದ ಸಮಾಜ ಹಲವಾರು ದಶಕಗಳಿಂದ ಉದ್ಧರಿಸಿದೆ.  ೭೦ ವರ್ಷಗಳಿಂದ ಸಮಾಜದ ಎಲ್ಲ ವರ್ಗಗಳ ಜನರೊಡನೆ ಸೇರಿ , ಅವರ ನಡುವೆ  ಸೇವೆ ಸಲ್ಲಿಸುತ್ತಿದ್ದಾರೆ . ಅವರ ಆದರ್ಶ ಜೀವನವನ್ನು ನೋಡಿ ಜನ ತಮ್ಮ ನಡೆಯನ್ನು ತಿದ್ದಿಕೊಳ್ಳುತ್ತಾರೆ. ಈ ಜ್ಞಾನಮೂರ್ತಿಗೆ ಇನ್ನೊಮ್ಮೆ ಕೃತಜ್ಞತೆ ಅರ್ಪಿಸುತ್ತ, ಚಿಕಿತ್ಸೆಯ ಜಿಜ್ನ್ಯಾಸದೆಡೆ ಮುಂದು ವರೆಯೋಣ.

ತತ್ವವೆಂದರೇನು ? ಕನ್ನಡಕ್ಕೆ ಶಬ್ದಶಃ ಭಾಷಾಂತರಿಸಿಧರೆ ತತ್ವ ಎಂದರೆ " ಅದುತನ" . " ಅದು" ಎನ್ನುವುದು " ತತ್ವಮಸಿ" ಮಹಾವಾಕ್ಯದಲ್ಲಿ ಬರುವ ತತ್ ಎಂದು ಅಭಿವ್ಯಕ್ತಿಸಿರುವ ಬ್ರಹ್ಮ. ಎಲ್ಲರ ಆತ್ಮನಾಗಿರುವ ಬ್ರಹ್ಮವು ವ್ಯಕ್ತಿಯೊಬ್ಬನಲ್ಲಿರುವ ಆತ್ಮವಾಗುತ್ತದೆ. ಎಂದರೆ ನಾವು ನಾನು ಎಂದು ಕರೆಯುವೆವಲ್ಲ ಅದು. ನಾವು ಕೆಲವೊಮ್ಮೆ ದೇಹವನ್ನು ನಾನು ಎನ್ನುತ್ತೇವೆ. ಇನ್ನೊಮೆ ಅಂತಃಕರಣ ( ಮನಸ್ಸು , ಬುದ್ಧಿ, ಚಿತ್ತ, ಅಹಂಕಾರಗಳೆಂದು ಇದನ್ನು ವರ್ಗಿಕರಿಸುತ್ತೇವೆ ). ಹೀಗಾಗಿ ಈ ಚಿಕಿತ್ಸೆಯ ಅಭ್ಯಾಸದ ಯಶಸ್ಸು ದೇಹ ಹಾಗು ಅಂತಃಕರಗಳ ಸಮಗ್ರ ಜ್ಞಾನವಿಲ್ಲದೆ ಅಸಾಧ್ಯ.

ನೃತ್ಯ, ಚಿತ್ರಕಲೆ, ಸಂಗೀತ , ದೇಹರಚನೆ, ಯೋಗ, ಆಯುರ್ವೇದ ಜ್ಞಾನದ ಮೂಲಕ ನಮ್ಮ ಒಳಗಿನ ಅರಿವು ಬೆಳೆಸಲು ನಾವು ಕಲಿಯಬಹುದು. ನಮ್ಮ ಉಸಿರಾಟದ ಹರಿವು  , ನಮ್ಮ ಸ್ನಾಯುಗಳಲ್ಲಿ ಇರುವ ಯಾವುದೇ ಒತ್ತಡ, ನಮ್ಮ ಮನಸ್ಸಿನ ಸ್ಥಿತಿ ಮತ್ತು ನರಮಂಡಲದ ವೃತ್ತಿಯನ್ನು ನಾವು ಗ್ರಹಿಸುತ್ತೇವೆ. ನಿರಂತರ ಅಭ್ಯಾಸದ ಮೂಲಕ ಇಂದ್ರಿಯಗಳ ಮೇಲೆ ನಂಬಿಕೆ ಇಡುವ ಸಾಮರ್ಥ್ಯವನ್ನು ನಾವು ಪರಿಷ್ಕರಿಸುತ್ತೇವೆ. ಯೋಗ ತತ್ವಶಾಸ್ತ್ರದ ಪ್ರಕಾರ , ಪ್ರಬುದ್ಧ ಪುರುಷನ ಅಂತಃಪ್ರಜ್ಞೆಯ ಸಾಮರ್ಥ್ಯದಿಂದ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿರುವ ವಿದ್ಯೆಯನ್ನು ಕಲಿಯುವದು ಅತ್ಯಂತ ವಿಶ್ವಾಸಾರ್ಹ ಮತ್ತು ಸುಲಭ.

Dr Bhushanji ಯಂತಹ  ಸಂಯೋಜಿತ ಚಿಕಿತ್ಸಾ ಸಂಪ್ರದಾಯದ ತಜ್ಞರು ಈ ಅಪರೂಪದ ಜ್ಞಾನವನು ತಮ್ಮ ದೈನಂದಿನ ಜೀವನಾಭಿವೃದ್ಧಿ ಹಾಗು ಚಿಕಿತ್ಸಾ ವಿಧಾನಗಳಲ್ಲಿ  ಉಪಯೋಗಿಸುತ್ತಾರೆ. ಉದಾಹರೆಗೆ, ಕೆಲವುಸಲ ಅತ್ಯಂತ ಪೌಷ್ಟಿಕಾಂಶದ ಆಹಾರ ಕೆಲವರಿಗೆ ಅಹಿತಕರ

ಸಾಬೀತಾಗಬಹುದು.ಕೆಲವು ಯೋಗಾಸನಗಳು ಅಪಾಯಕಾರಿಯಾಗಬಹುದು, ಹೆಚ್ಚು ಹೆಚ್ಚಿನ ವೇತನದ ವೃತ್ತಿಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು, ಜೀವಕ್ಕೆ ಹಾನಿ ತರಬಹುದು. ಅಥವಾ ಕೆಲವು ಸಾಮಾನ್ಯ ವ್ಯಾಯಾಮಗಳಿಂದ ಗಾಢವಾದ ವಿಶ್ರಾಂತಿ ದೊರಕಬಹುದು. ಆದರೆ ಆಧುನಿಕ ವೈದ್ಯಕೀಯ ಶಾಸ್ತ್ರ ಈ ಸಾಮಾನ್ಯ ಜ್ಞಾನದಿಂದ ವಂಚಿತವಾಗಿದೆ ಎಂದರೂ ತಪ್ಪಿಲ್ಲ.

ಈ ಚಿಕಿತ್ಸೆಯಿಂದ ನಾಲ್ಕು ದಶಕದಿಂದ ಗುಣವಾದ ಜನರ ಆನಂದ ಅಪಾರ. ಜನರ ತೃಪ್ತಿ ಹಾಗು ನಂಬಿಕೆ ಈ ಚಿಕಿತ್ಸೆಯ   ಜನಪ್ರಿಯತೆಯನ್ನು ವ್ಯಕ್ತ ಪಡಿಸುತ್ತವೆ. ಇದರಿಂದ ಸಂಪೂರ್ಣ ಜನ ಜಗತ್ತಿಗೆ ಪ್ರಯೋಜನಕಾರಿ ಆಗಬಹುದು.  ಆದರೆ ಸೈದ್ಧಾಂತಿಕ ಪಕ್ಷಪಾತ,Pharmaceutical ಕಂಪನಿಗಳ ಅನುದಾನಿತ ಸೋಂಶೋಧನೆ ಹಾಗು ವೈದ್ಯಕೀಯ ಖೇತ್ರದ “ಕೂಪ ಮಂಡೂಕ” ಚಿಕಿತ್ಸಾ ವಿಧಾನದ ಕಾರಣದಿಂದ ಈಥರದ ಎಷ್ಟೋ ಉಪಯುಕ್ತ ಚಿಕಿತ್ಸೆಗಳ ಬಗ್ಗೆ ಸಮರ್ಪಕ ಅಧ್ಯಯನ ನಡೆಯುತ್ತಿಲ್ಲ.

Dr Jathar ಅವರ ಚಿಕಿತ್ಸಕ್ರಮದಲ್ಲಿ ಆಯುರ್ವೇದದ ಮರ್ಮ ಚಿಕಿತ್ಸೆ , ದಶಾನಾಡಿ ವಿಧಾನ, ಫಿಸಿಯೋ ಥೆರಪಿ , ಯೋಗಾಸನ, ಪ್ರಾಣಾಯಾಮ,   ಬಳಕೆ ಕಂಡು ಬರುತ್ತದೆ, ಮರ್ಮ ಚಿಕಿತ್ಸೆಯು ಪುರಾತನ ಭಾರತೀಯ ಆಚರಣೆಯಾಗಿದ್ದು, ದೇಹದಲ್ಲಿ ಸೂಕ್ಷ್ಮ ಶಕ್ತಿಯ  (

ಪ್ರಾಣ ) ನಿರ್ವಹಣೆಯಿಂದ ರೋಗ ಗುಣಪಡಿಸುವ ಪ್ರಕ್ರಿಯೆಯನ್ನು ಪ್ರೇರೇಪಿಸಲಾಗುತ್ತದೆ. ಮರ್ಮ ಚಿಕಿತ್ಸೆಯು ಶರೀರ, ಮನಸ್ಸು ಮತ್ತು ಪ್ರಜ್ಞೆಗೆ ಪ್ರವೇಶ ಬಿಂದುಗಳೆಂದು ಪರಿಗಣಿಸಲ್ಪಟ್ಟಿರುವ ದೇಹದಲ್ಲಿ 107 ಪಾಯಿಂಟ್ಗಳ ಬಳಕೆಯನ್ನು ಆಧರಿಸಿದೆ. ಮರ್ಮದ ಜ್ಞಾನವು ಮನಸ್ಸಿನ ಶಾಂತಿ ಮತ್ತು ಆರೋಗ್ಯದ ಶಾಂತಿಯನ್ನು ಪುನಃಸ್ಥಾಪನೆಯ ಉದ್ದೇಶಕ್ಕೋಸ್ಕರ ಸಮಗ್ರ ಮತ್ತು ಸೂಕ್ಷ್ಮ ಶರೀರಗಳ ಮೂಲಕ ಪ್ರಾಣದ ಹರಿವನ್ನು ಪ್ರಭಾವಿಸಲು ಅನುವು ಮಾಡಿಕೊಡುತ್ತದೆ. ಮರ್ಮ ಚಿಕಿತ್ಸೆಯನ್ನು ಪುರಾತನ ಕಾಲದಿಂದ Dr ಜಠಾರರಂತಹ ನುರಿತ  ಮತ್ತು ಅಂತರ್ಬೋಧೆಯ ಆಯುರ್ವೇದದ ತಜ್ಞರು ಮಾತ್ರ ಅಭ್ಯಾಷಿಸುತ್ತ ಬಂದಿರುತ್ತಾರೆ. Dr ಜಠಾರರ ಪ್ರಕಾರ ಆಯುರ್ವೇದ ಶಾಸ್ತ್ರ ಆಧ್ಯಾತ್ಮಿಕ ಹಾಗು ಭೌತಿಕ ವಿಜ್ಞಾನದ ಸಮ ಹಾಗು ಪರಿಪೂರ್ಣ ಮಿಶ್ರಣ.ಅವರ ಪ್ರಕಾರ ಕನಸುಗಳು ಕೂಡ ಕೆಲವು ಕಾಯಿಲೆಗಳ ವ್ಯಾಖ್ಯಾನ ಹೊಂದಿರುತ್ತವೆ .

ಈ ಚಿಕಿತ್ಸಾ ಕ್ರಮದ ಲಾಭವನ್ನು ಹಲವಾರು ಪಾಶ್ಚಾತ್ಯ ದೇಶಗಳಿಂದ ಬಂದ ಯೋಗ ವಿದ್ಯಾರ್ಥಿಗಳು ಪಡೆದಿದ್ದಾರೆ. ಈ ಕ್ರಮವನ್ನು ಶೈಕ್ಷಣಿಕ ತರಬೇತಿಯ ಮೂಲಕ ಯೋಗ ಥೆರಪಿಸ್ಟ್  ಹಾಗು ಯೋಗ ಶಿಕ್ಷಕರಿಗೆ ಕಲಿಸುವ ಯೋಜನೆ ನಮ್ಮದು.  

ಈ ಕ್ರಮದಿಂದ ಜಗತ್ತಿನ ಸಾಮರಸ್ಯ ಸಾಧ್ಯ ಎನ್ನುವ ವಿಶ್ವಾಸ Dr ಜಠರ ಅವರದು.

Dr Jathat Says “ By focused working through Human body one can establish healthy mind in people and Healthy people can only form healthy and harmonious society “

Please write to us for more information on www.madyogi.in

Or Connect us on Facebook Page.

Maha Arogya Dhama, Gokarna

Published on Categories wellness

About madyogi

Namaste ! A Journey of 1000 Miles starts with the first step, but its a secret about the first step itself. Nobody knows where,how, and when to take the first lunge. There are numerous scriptures, doctrines, and So Called " Gurus" available across the globe . But none tells you about that one secret. As a wise man once said " The thing can not be said should not be said". But it is funny that there are schools with hoardings giving certificates for " Master of divinity" as well . However one has to be fool to be ignorant in this age of information. Every qualification, certification has zero value if one fails to know himself . It took 8 Long years for me to find that secret through relentless practice, re-search, and self study of my own self through to reach this state of " Good for Nothing" i mean to be ordinary and Goal-free. I will be glad if i can be of any help to any one with tips and methods to this madness. But the the path is derived by each one themselves, i have no role to play in anyones path apart from being a tour guide and i would call the path i walk as " Padmapatha " , a Path of self discipline and self enquiry. With Lv & Light , Padma / The Madyogi

Leave a Reply

Your email address will not be published. Required fields are marked *